ರೂಢಿ ನಾಮ ! ಭಾಗ -೨

ರೂಢಿ ನಾಮ ! ಭಾಗ -೨

ಅಚ್ಚಣ್ಣಿ, ನಿಂಗಣ್ಣಿ ಅವರ ಗುಂಪಿಗೆ ಇನ್ನಷ್ಟು ಹೆಸರುಗಳನ್ನು ಸೇರಿಸುವುದು ಮರೆತಿದ್ದೆ. ಪುಟಾಣಿ, ಪೂಣಿ- ಪುಟಾಣಿ ಅನ್ನೋವ್ರು ಅವರ ಮನೆಗೆ ಬೇಬಿಯಾಗಿದ್ದರು ಅಂತ ಕಾಣತ್ತೆ. ಸಣ್ಣವಳಿದ್ದಾಗಿಂದ “ಪುಟಾಣಿ” ಅಂತ ಕರೆದ್ರು, ದೊಡ್ಡವಳಾದಮೇಲೂ ಪುಟಾಣಿ ಅಂತ ಕರೆದ್ರು, ಹಾಗೇ ಕರೀತಲೇ ಇದ್ದರು. ಪುಟಾಣಿಗೆ ಮದುವೆಯಾಗಿ, ಒಂದಷ್ಟು ಪುಟಾಣಿಗಳು ಹುಟ್ಟಿ, ಅವುಕ್ಕೆಲ್ಲಾ ಮದುವೆಯಾಗಿ, ಇನ್ನಷ್ಟು ಪುಟಾಣಿಗಳು ಹುಟ್ಟಿದಮೇಲೂ ಪುಟಾಣಿ “ಪುಟಾಣಿ” ಯಾಗೇ ಉಳಿದರು. ನಾನು ನೋಡಿದಂತೆ “ಪುಟಾಣಿ” ದೊಡ್ಡದಾಗೇ ಇದ್ದರು (ಗಾತ್ರದಲ್ಲಿ). ಮೆದುಳಿನ ಗಾತ್ರ ಚಿಕ್ಕದಿತ್ತೇನೋ??? ಪೂಣಿ ಅನ್ನೋವರ ಪೂರ್ಣ ಹೆಸರು “ಪೂಣಕ್ಕಯ್ಯ” ಅಂತ. ಅವರಿಗೆ ಈ ರೂಢಿನಾಮ ಒಂದ್ ತರ ಶಾರ್ಟ್ ಫಾರ್ಮ್ ಕೂಡಾ ಆಗಿತ್ತು. ಪೂರ್ಣ ಅನ್ನೋ ಹೆಸರು ಹಾಗೆ ಆಯ್ತೇನೋ ಗೊತ್ತಿಲ್ಲ. ಪೂಣಿ ಅಂತ ಕರೆದು, ಕರೆದು, ನಿಜವಾದ ಹೆಸರೇ ಸರಿಯಾಗಿ ತಿಳಿಲಿಲ್ಲ. ಪೂಣಕ್ಕಯ್ಯ ಅಂತ ಹೊರಗಿನವರು ಹೇಳ್ತಾ ಇದ್ದಿದ್ರಿಂದ ಅದೇ ಅವರ ನಿಜವಾದ ಹೆಸರು ಅಂತ ಭಾವಿಸಿದೆ. ವಸಂತ ಲಕ್ಷ್ಮಿ, ಸೀತಾಲಕ್ಷ್ಮಿ ಅಂತ ಅಕ್ಕ ತಂಗಿಯರಿದ್ದರು. ನಮಗಿಂತ ತುಂಬ ದೊಡ್ಡವರು. ವಸಂತ ಲಕ್ಷ್ಮಿಗೆ “ಬುಡ್ಡಿ” ಅಂತ ಕರೆಯುತ್ತಿದ್ದರು. ಹೇಗೆಲ್ಲ ನೋಡಿದರೂ ವಸಂತ ಲಕ್ಷ್ಮಿಯಲ್ಲಿ “ಬುಡ್ಡಿ” ಕಾಣಿಸಲಿಲ್ಲ ನನಗೆ. ನಿಮಗೇನಾದರೂ ಕಾಣಿಸತ್ತಾ ಅಂತ “ಸೀಮೇಎಣ್ಣೆ ಬುಡ್ಡಿ” ಇಟ್ಕೊಂಡು ನೋಡಿ ನನಗೆ ದಯವಿಟ್ಟು ತಿಳಿಸುತ್ತೀರಾ? ಸೀತಾ ಲಕ್ಶ್ಮಿಗೆ “ಲಕುಮಿ” ಅಂತ ಕರೀತಿದ್ದ್ರೂ ಅಂತ ಕಾಣಿಸತ್ತೆ, ಏಕೇಂದರೆ, ಅದು ಕಾಲಾಂತರದಲ್ಲಿ “ಲ” ಕಾರ ಬಿಟ್ಟು ಹೋಗಿತ್ತು ರೂಢಿನಾಮದಲ್ಲಿ. ನಮಗೆ “ನರಸಮ್ಮ” ಅಂತ ಹಿಂದಿ ಟೀಚರ್ ಇದ್ದರು ಮಿಡಲ್ ಸ್ಕೂಲ್ ನಲ್ಲಿ. ಅವರು ನಮ್ಮ ಬಡಾವಣೇಯಲ್ಲೇ ಇದ್ದರು. ಹಾಗಾಗಿ ನಮ್ಮ ಮನೆಯವರಿಗೇನು, ಇಡೀ ಬಡಾವಣೆಯಲ್ಲಿ ಎಲ್ಲರಿಗೂ ಪರಿಚಯವಾಗಿದ್ದರು. ಒಂದು ದಿನ ನಮ್ಮಪ್ಪ “ಯಾರ್ ನಿಮಗೆ ಹಿಂದಿ ಹೇಳ್ಕೊಡೋದು ಸ್ಕೂಲ್ ನಲ್ಲಿ, “ಅಮ್ಮಾಲಿ”ನೇ”? ಅಂದ್ರು. ನನಗೆ ಅವರ ರೂಢಿನಾಮ ಕೇಳಿ ನಗುಬಂದು, ಸ್ಕೂಲ್ನಲ್ಲಿ ನಮ್ಮ ಸ್ನೇಹಿತೆಯರಿಗೆಲ್ಲ ಹೇಳಿದೆ. ಕಡೆಗೆ ಹುಡುಗರಿಗೆಲ್ಲ ಈ ಹೆಸರು ಗೊತ್ತಾಗಿ, ಅವರೇನಾದರೂ ಬೈದಾಗ ಅವರ ಮೇಲಿನ ಸಿಟ್ಟನ್ನೆಲ್ಲ “ಅಮ್ಮಾಲಿ – ತಿಮ್ಮಾಲಿ” ಅಂತ ಹೇಳಿ ತೀರಿಸಿಕೊಳ್ಳುತ್ತಿದ್ದರು. ಇನ್ನೋಂದು ತಮಾಷೆ ಅಮ್ಮಾಲಿ ವಿಷಯದಲ್ಲಿ ಅಂದರೆ, ಅವರಿಗೆ “ಅಪ್ಪಟೆ” ಮೂಗಿತ್ತು. ಅಪ್ಪಟೆ ಮೂಗಿನ ಚಪ್ಪಟೆ ಚಿಟ್ಟೆ ಅಂತಲೂ ಕರೆದಿದ್ದುಂಟು ಅಮ್ಮಾಲಿಗೆ. ಅಮ್ಮಾಲಿಗೆ ಅಪ್ಪಟೆ ಮೂಗು ಹೇಗಾಯಿತು ಅಂತ ಒಂದು ಕಥೇನೇ ಇತ್ತು. ಅದನ್ನು ಮುಂದಿನ ಸಂಚಿಕೆಗೆ ಕಾದಿರಿಸಿದೆ……….

Advertisements

About daams

A practicing pediatrician for more than 20 years. Interested in writing, music, dance, drama, fun & friendship.
This entry was posted in ಲೇಖನ ! and tagged . Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s