ನಾ ಕಂಡ ಕನ್ನಡೋತ್ಸವ – ೨೦೦೫ !

ನಾ ಕಂಡ ಕನ್ನಡೋತ್ಸವ -ಕವನದಲ್ಲಿ  !ಕನ್ನಡೋತ್ಸವ-೨೦೦೫ !

ಕನ್ನಡೋತ್ಸವವಿದು ಕನ್ನಡಿಗರ ಸಂಗಮ,

ಕನ್ನಡ ನಾಡು, ನುಡಿ, ಭಾಷೆ, ಕಲೆಗೊಂದು ವ್ಯಾಯಾಮ.

ಕ್ಯಾಲಿೋರ್ನಿಯ ದ (ಉತ್ತರ) ಕನ್ನಡಿಗರು ಕೈಗೊಂಡ ಸುಕರ್ಮ.

ಕನ್ನಡಾಂಭೆಯು ನಲಿದಳು, ಹರಸಿದಳು, ತಂದಳು ಸಂಭ್ರಮ.

ಹಚ್ಚಿಸಿದೆವು ಕನ್ನಡದಾ ದೀಪ ಮೊದಲಲ್ಲಿ,

ಮಹದೇವಪ್ಪನವರು (ಡಾ), ಬೆಳಗಿಸಿದರು ಆ ದೀಪವನ್ನು ಮುದದಲ್ಲಿ.

ಹೆಮ್ಮೆಯಲಿ ವೇಷಧರಿಸಿ ಕುಣಿದರು, ಹಾಡಿದರು ಮಕ್ಕಳಲ್ಲಿ.

ಮವಾಸು ವವರು “ಕೃಷ್ಣ ಸಂಧಾನ” ನಾಟಕ ಪ್ರಯೋಗಿಸಿದರಲ್ಲಿ.

ಪರಮೇಶ್ವರಹೆಗಡೆ ಹರಿಸಿದ ಗಾನಸುಧೆಯೊಳಗೆ,

ಪಂದನಲ್ಲೂರ್ ಶೈಲಿಯ ವಸುಂಧರರ ನೃತ್ಯನಾಟ್ಯಗಳೊಂದಿಗೆ,

ಪರಿಪರಿಯ ಝೇಂಕಾರ ಇಳಿಸಿದ ಇಂಚರ ರಾಗದೊಳಗೆ,

ಪೂರೈಸಿತು ನಾಟಕವದು “ಮದುವೆ, ಮದುವೆ” ಕಡೆಗೆ ಮದುವೆಯೊಂದಿಗೆ.

ಹೊಸಚಿಗುರ ಪುಟಾಣಿಗಳ ಹೊಸರಾಗಗಳ ಪರಿಚಯಿಸಿದಾಗ,

ಹೊಸದಲ್ಲ, “ಸಾವಿಲ್ಲದ ಮನೆ” ಎಂದು ಕಾರಂತರ ಕಿಸಾಗೋತಮಿ ಮೊಳಗಿದಾಗ,

ಹೊರಹೊಮ್ಮಿಸಿದರು, ಸುನೀಲ್ ಶಂಕರ್ ಎಲ್ಲರ ನಗುವ ಸಾಮರ್ಥ್ಯವನಾಗ,

ಹೊರಟವರೆಲ್ಲಾ ನಿಂತು “ಗೋಕುಲ ನಿರ್ಗಮನ” ಕ್ಕೆ ತಾಳಹಾಕಿ ಕುಣಿದರಾಗ.

ಮೊದಲ ದಿನ ಮುಗಿಯುತಿರಲು,

ಮಾರುಗೊಳಿಸಿ, ವಿವಿಧಕಲೆಯ ಪ್ರದರ್ಶಿಸಿದ ಸಮರ್ಥನಂ ತಂಡದೊಂದಿಗೆ ಎಲ್ಲರಿಗೂ ಅಮೃತದೂಟ ಸರಬರಾಜಾಯಿತು ಆಗ.!!!.

ಕನ್ನಡೋತ್ಸವದ  ಮರುದಿವಸ————–,

ಪಾರ್ಥಸಾರಥಿ, ಗಿರಿಜರ ತರಭೇತಿಯಿಂದ,

ಪ್ರಾರಂಭವಾಯಿತು ಮಕ್ಕಳ ಸರಿಗಮ, “ಸಿರಿಚಂದನ” ದಂದ.

ಮಾಧವ, ನಿರ್ಮಲ ನಿರ್ಧೇಶನದಿಂದ,

ಮನಮೋಹಕ “ದಾಸೋಹಂ ಮತ್ತು ಪುಣ್ಯಕೋಟಿ” ನೃತ್ಯದಾನಂದ.

ಕುಮಾರ ವ್ಯಾಸ ವಿರಚಿತ, ಕವಿ, ನಾರಣಪ್ಪ ರಚಿತ,

“ಕರ್ಣ ರಸಾಯನ” ಗೀತರೂಪಕ, ತೆರೆಕಂಡಿತು ನಾಟಕನೃತ್ಯ.

ಕೆ.ವಿ. ರಾಮ್ ಪ್ರಸಾದರ ಘನ ನಿರದೇಶನ ಸಹಿತ,

ಕನ್ನಡಿಗರೆಲ್ಲರ ಕಣ್ ಮನ ಸೆಳೆದ ಯಕ್ಷಗಾನ ಕುಣಿತ.

ಚಂದ್ರಶೇಕರ ಕಂಬಾರರ ಕನ್ನಡ ಗೀತರೂಪಕ ಆಧಾರಿತ,

ಚಿಕಾಗೋ “ಕಲಾರಂಗ” ದ ಪ್ರಕಾಶರ ಪ್ರೇರಣೆಯಿಂದ “ಸಂಗ್ಯಾ ಬಾಳ್ಯ” ನಾಟಕ ಕಥಾ,

ರಂಗೇರಿಸಿ ಸಭೆಯನು, ರಂಗವೇರಿತು  ರಾರಾಜಿಸುತ.

ರಾಗ ನಾಟದ ಆದಿಯಿಂದ ಮೊಳಗಿತು “ನಿನಾದ” ದ ನಾದ ಸಂಗೀತ.

ಮಧುಕಾಂತರ ಮೃದು ಹಾಸ್ಯದ ಹೊನಲಿನಲಿ,

ನಚಿಕೇತರ ಹಾಗೂ ಜಯಂತಿಯರ ರಸಸಂಗಮ ಜುಗಲ ಬಂದಿಯಲಿ,

ಬಂಧಿಸಿತು ಶೋತೃಗಳನೆಲ್ಲಾ ಸುರ ಸಂಗೀತ ಸ್ವರ ಸ್ವರ್ಗದಲಿ.

ಬಂದವರಿಗೆ, ಕಾರ್ಯ ನಿರ್ವಹಿಸಿದವರಿಗೆಲ್ಲಾ ಕರೆದು ರವಿರೆಡ್ಡಿ ವಂದಿಸಿದರಲ್ಲಿ(ವಂದನಾರ್ಪಣೆಯಲಿ).

ಕುವೆಂಪು ವಿರಚಿತ “ಓ, ನನ್ನ ಚೇತನಾ” ಕ್ಕೆ ಚೈತನ್ಯ ತರಿಸಿ,

“ಜಯ ಭಾರತ ಜನನಿಯ ತನುಜಾತೆ” ಗೆ “ಜೈ” ಎನಿಸಿ, ಹಾಡಿಸಿ,

ಧನ್ಯರಾದರು ಅಶೋಕ್ ಕುಮಾರ್ ಅವರು ಕೊನೆಯಲಿ ಸಮುದಾಯಿಸಿ.

ಬೀಳ್ಕೊಟ್ಟೆವು ಒಬ್ಬರನ್ನೊಬ್ಬರು ಅಮೆರಿಕ, ಭಾರತ ರಾಷ್ಟ್ರಗೀತೆಗಳನು ಹಾಡಿ, ಮುಗಿಸಿ.

“ಜೈ ಕನ್ನಡಾಂಬೆ” !

Advertisements

About daams

A practicing pediatrician for more than 20 years. Interested in writing, music, dance, drama, fun & friendship.
This entry was posted in ಕವನ !, ವರದಿ !. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s