Monthly Archives: ಸೆಪ್ಟೆಂಬರ್ 2009

ಗಣೇಶ ಚತುರ್ಥಿ !

ಬರುವುದು ಶ್ರೇಷ್ಠ ಗಣೇಶ ಚತುರ್ಥಿ ತಪ್ಪದೇ ಪ್ರತಿ ವರುಷಕ್ಕೊಂದು ಸರತಿ ಬಾದ್ರಪದ ಶುಕ್ಲದಾ ಚೌತಿ ನೀಡುವವನವ ಸರ್ವರಿಗೂ ಸುಮತಿ! ಪೂಜಿಸುವ ಗಣಪನಂದು ಭಕ್ತಿಯಿಂದ ಫಲ, ಪುಷ್ಪ, ಗರಿಕೆ, ವಸ್ತ್ರಗಳಾದಿಯಿಂದ ಪೊರೆವನವ ಎಲ್ಲರನು ಕಷ್ಟ ಕಾರ್ಪಣ್ಯಗಳಿಂದ ಫಲಿಸುವುದೆಲ್ಲ ಕಾರ್ಯಗಳು ನಿರ್ವಿಜ್ಞದಿಂದ! ನೋಡದಿರಿ ಚಂದ್ರನನು ಚೌತಿಯಂದು ನಲಿಯಿರಿ ಚಮತ್ಕಾರದಿಂದಂದು ಸವಿಯಿರಿ ಕಡುಬು, ಮೋದಕಗಳಂದು ಶ್ರವಿಸಿರಿ ಕುಳಿತು ಶಮಂತಕೋಪಖ್ಯಾನವಂದು! ದುಃಖ-ದಾರಿದ್ರ್ಯಗಳ … ಓದನ್ನು ಮುಂದುವರೆಸಿ

Posted in ಕವನ ! | 1 ಟಿಪ್ಪಣಿ

ಬಾ, ಬಾರೋ ಚಂದ್ರಮಾ !

ಬಾ ಬಾರೋ ಚಂದ್ರಮಾ !!! ಇರುಳಲ್ಲಿ ಬೆಳಕು ಚೆಲ್ಲಿ, ನೀಲಿಯಾಗಸದಲ್ಲಿ ಬೆಳ್ಳಿ ತಳ್ಳಿ, ಶಾಂತತೆಯ ಹುಣ್ಣಿಮೆ ರಾತ್ರಿಯಲ್ಲಿ, ಬಾ ಬಾರೋ ಚಂದ್ರಮಾ ಬಾನಿನಲ್ಲಿ !!! ನೋಡುತಿರೆ ನಿನ್ನ, ನನ್ನದಾಗುವುದು ಚೇತನ, ನಲಿವಿನ ನಯನ, ಗೆಲುವಿನ ಗಮನ, ಸುಂದರ ಕವನ, ಸುಮಧುರ ಗಾಯನ, ಬಾ ಬಾರೋ ಚಂದ್ರಮಾ,  ಚಂದನ !!! ಬರಡೆಂಬ ಬಿಸಿಲಿಂದ ಬಳಲಿದ ಬಾಳಿಗೆ, ಬಾರದೇ … ಓದನ್ನು ಮುಂದುವರೆಸಿ

Posted in ಕವನ ! | ನಿಮ್ಮ ಟಿಪ್ಪಣಿ ಬರೆಯಿರಿ

ಡಾ. ರಾಜ್ ನೆನಪಿನಲಿ !

ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯನ್ನು ಹೇಗೆ ಬಾಳಿಸಿ ಬೆಳಗಬೇಕು ಎಂಬುದನ್ನು ತೋರಿಸಿಕೊಟ್ಟ ಡಾ. ರಾಜ್ ಅನ್ನು ಸ್ಮರಿಸೋಣ ! ಹೀಗೊಂದು ಡಾ. ರಾಜ್ ಸ್ಮರಣ !! ನಮನ !!! ಕನ್ನಡದ ಕಂದಾ, ನೀ ಕರುನಾಡ ಅಣ್ಣನಾದೆ, ಕನ್ನಡಿಗರ ಹೃದಯದಲಿ ಕನ್ನಡದ ಉಸಿರಾದೆ, ಕರುನಾಡು ಬೆಳೆಸಿದ ಮಂದಾರ ಮರವಾದೆ, ಕೋಟಿ ಕನ್ನಡಿಗರಿಗೆ ಕನ್ನಡದ ಕಣ್ಮಣಿಯಾದೆ.!!! ಸೌಜನ್ಯ, … ಓದನ್ನು ಮುಂದುವರೆಸಿ

Posted in ಕವನ ! | ನಿಮ್ಮ ಟಿಪ್ಪಣಿ ಬರೆಯಿರಿ

ಅಳಲು !…ಅಮ್ಮನ ನೆನಪು !

” ಅಳಲು ” ನೀ ಮರೆಯಾಗಿ ಹೋದೆ ಏಕೆ? “ಬದುಕಿನ ಸವಾಲುಗಳನ್ನೆಲ್ಲಾ ಎದುರಿಸಿ, ಬಾಳಿನ ಅರ್ಥಗಳನ್ನೆಲ್ಲಾ ಗ್ರಹಿಸಿ, ಬಂಧು ಬಾಂಧವರಿಗೆಲ್ಲಾ ಅಮೃತವನ್ನು ಉಣಿಸಿ, ನಗು ನಗುತಾ ನಗಿಸಿ, ನಮ್ಮನ್ನೆಲ್ಲಾ ಬೆಳಸಿ,” ನೀ ಮರೆಯಾಗಿ ಹೋದೆ ಏಕೆ ? ನಿನ್ನಾ ನೆನಪು ನಿತ್ಯ ನೂತನ.! “ನಿನ್ನಾ ಮನಸು ತಿಳಿಯಾದ ಸಾಂತ್ವನ, ನಿನ್ನಾ ಹೃದಯ ಸೌಜನ್ಯದ ಕಾನನ, ನಿನ್ನಾ … ಓದನ್ನು ಮುಂದುವರೆಸಿ

Posted in ಕವನ ! | 2 ಟಿಪ್ಪಣಿಗಳು

ಕನ್ನಡ ನುಡಿ, ಕನ್ನಡ ತಾಯಿ, ಕನ್ನಡಿಗರು !

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ——— ಕರುನಾಡ  ನಾಡನುಡಿ, ಕನ್ನಡಿಗರಿಗದು  ಕನ್ನಡಿ. ಮಾತನಾಡಿದರದು  ಮುತ್ತಿನಂಗಡಿ, ಅದುವೇ ನಮ್ಮ “ಕನ್ನಡ” ನುಡಿ. ಮಾಣಿಕ್ಯವೀಣೆ  ಪಿಡಿದಿಹಳು  ಕೈಯಲಿ, ಮಂದಹಾಸದ  ನಗುವಿಹುದು  ಮುಖದಲಿ, ಕರೆದು  ಕೊಡುತಿಹಳು  ಅಭಯಹಸ್ತವನಿಲ್ಲಿ, ಅವಳೇ  ನಮ್ಮ  “ಕನ್ನಡಾಂಬೆ”. ನೆಲಸಿಹರು  ಕನ್ನಡನಾಡಿನಲಿ, ನಡೆದಾಡುವರು  ದೇಶದೆಲ್ಲೆಡೆಯಲಿ, ನಕ್ಕುನಲಿದಾಡುತಿಹರು  ಆ  ಹೊರನಾಡುಗಳಲಿ, ಕನ್ನಡದ  ಕಂಪನು  ಕೋರೈಸುತಲಿ. ಅವರೇ ನಮ್ಮ “ಕನ್ನಡಿಗರು”. ಹಚ್ಚಿಸಿದರು ಕನ್ನಡದ … ಓದನ್ನು ಮುಂದುವರೆಸಿ

Posted in ಕವನ ! | 1 ಟಿಪ್ಪಣಿ

ಒಲವು !

ಒಲವು ! ಒಲಿದೆ ನೀನು ಒಂದು ಕ್ಷಣಕೆ ನನ್ನ ಬಾಳ ಪಥದಲಿ ನಡೆದೆ ನಾನು ಅದರ ಮೇಲೆ ನನ್ನ ಬಾಳ ರಥದಲಿ! ಸವಿನೆನಪು ಸಾಕೊಂದು ಬಾಳಿನಾ ಅರ್ಥಕೆ ಸವಿಯುತಿರೆ ಸಾಗಿಹುದು ಬದುಕಿನಾ ಪತಾಕೆ! ಆ ಮಧುರ ಅನುಭವವು ಅಮರವಾಗಿದೆ ಮನಕೆ ಆ ಅಧರ ಅದರುವಿಕೆ ಅರಸುತಿದೆ ಜೀವಕೆ! ಬರದಿರಳು ನಿದಿರೆಯು ನಿನ್ನಂದ ನೆನೆಯದೆ ಹಗಲಿರುಳು ಸಾಗದು … ಓದನ್ನು ಮುಂದುವರೆಸಿ

Posted in ಕವನ ! | 1 ಟಿಪ್ಪಣಿ

ಅಣ್ಣ ಕಲಿಸಿದ ಅಪರೂಪದ ಕನ್ನಡ ಪದಗಳು !

ಅಣ್ಣ ಕಲಿಸಿದ ಅಪರೂಪದ ಕನ್ನಡ ಪದಗಳು ! ಅಣ್ಣ ಕಲಿಸಿದ ಕನ್ನಡ ಪದಗಳು ! ಅಣಿಅಣಿಯಾದ ಕರುನಾಡ ಪದಗಳು ! ಎನಾದ್ರೂ ತೊಂದ್ರೆ ಆದ್ರೇ, “ಎಡವಟ್-ಎಂಗರವಟ್” ಅಂದ್ರೆ, ಎಡವಟ್ “ಶಾನೆ” ಆಗಿದೆ ಕಂಡ್ರೇ ! “ಒಬ್ಬಟ್” ತಿಂದ್ರಲ್ಲಾ, “ಇಬ್ಬಟ್” ಆಡ್ಕೋಳ್ರಲ್ಲಾ, “ದಿಟ” ಹೇಳ್ಬೇಕಲ್ರಾ ! “ಆನಾಡಿ” ಒಂದ್ ಮಾತು, “ಅಚ್ಚೌಟ್ಲ ಕಾಯಿ” ಮರದಿಂದ ಬಿದ್ದೇಬಿತ್ತು, “ಅನಾಹುತ” … ಓದನ್ನು ಮುಂದುವರೆಸಿ

Posted in ಕವನ ! | 1 ಟಿಪ್ಪಣಿ